ಅಷ್ಟಮೂರ್ತಿಗಳು

ಈಶ್ವರನಿಗೆ ಇರುವ ಎಂಟು ಸ್ವರೂಪಗಳು. ಈಶ್ವರನಿಗೆ ಅಷ್ಟಮೂರ್ತಿಯೆನ್ನುವ ಹೆಸರೂ ಉಂಟು. ಭವ, ಶರ್ವ, ಈಶಾನ, ಪಶುಪತಿ, ಭೀಮ, ಉಗ್ರ, ಮಹಾದೇವ, ರುದ್ರ ಇವರೇ ಶಿವನ ಅಷ್ಟಮೂರ್ತಿಗಳು. ಇವರಿಗೆ ಕ್ರಮವಾಗಿ ಉಷಾ, ಸುಕೇಶೀ, ಶಿವಾ, ಸ್ವಾಹಾ, ದಿಕ್, ದೀಕ್ಷಾ, ರೋಹಿಣಿ, ಸುವರ್ಚಲಾ ಎನ್ನುವ ಶಕ್ತಿಯರೂ; ಶುಕ್ರ, ಅಂಗಾರಕ, ಹನೂಮಂತ, ಸ್ಕಂದ, ಸ್ವರ್ಗ, ಸಂತಾನ, ಬುಧ, ಶನಿ ಎನ್ನುವ ಮಕ್ಕಳೂ ಇದ್ದಾರೆ. 								
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ